The Palace of Mysore is a historical palace in the city of Mysore. It is the official residence and seat of the Wodeyars and rulers, the royal family of Mysore. The architectural style of domes of the palace is commonly described as Indo-Saracenic and blends Hindu, Muslim, Rajput, and Gothic styles.
ಅರಮನೆಗಳ ನಗರಿ ಎಂದೇ ಪ್ರಸಿದ್ಧವಾಗಿರುವ ಮೈಸೂರಿನಲ್ಲಿ ಅಂಬಾವಿಲಾಸ ಅರಮನೆ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮೈಸೂರು ಸಂಸ್ಥಾನವನ್ನು ಶತಮಾನಗಳ ಕಾಲ ಆಳಿದ ಒಡೆಯರ್ ವಂಶದ ಅರಸರ ಖಾಸಗಿ ನಿವಾಸ ಮತ್ತು ದರ್ಬಾರ್ ಹಾಲ್ ಆಗಿತ್ತು ಈ ಅಂಬಾ ವಿಲಾಸ ಅರಮನೆ. ಕರುನಾಡ ಹೆಮ್ಮೆಯ ರಾಜಮನೆತನಗಳಲ್ಲಿ ಮೈಸೂರು ಒಡೆಯರ ವಂಶವೂ ಒಂದು. ಕರ್ನಾಟಕದ ಇಂದಿನ ಸಾಂಸ್ಕೃತಿಕ ರಾಜಧಾನಿ ಮೈಸೂರು ಅರಮನೆಗಳ ನಗರಿ ಎಂದು ಖ್ಯಾತವಾಗಿದ್ದೇ ಒಡೆಯರ ಕಾಲದಲ್ಲಿ. ಮೈಸೂರು ದಸರೆಯಷ್ಟೇ ಮೈಸೂರು ಅರಮನೆಯೂ ವಿಶ್ವವಿಖ್ಯಾತ. ಕರುನಾಡ ನೆಲದಲ್ಲಿ ಕಟ್ಟಲಾದ ಇತ್ತೀಚಿನ ಅರಮನೆ ಎಂಬ ಖ್ಯಾತಿಯೂ ಇದಕ್ಕಿದೆ. ಭಾರತೀಯ ಸಾಂಪ್ರದಾಯಿಕ ವಾಸ್ತುಶಿಲ್ಪದಿಂದ ಒಡಮೂಡಿದ ಈ ಸುಂದರ ಸೌಧ, ಬ್ರಿಟಿಷರು ಭಾರತದಲ್ಲಿ ಬಲವಾದ ಹಿಡಿತ ಹೊಂದಿದ್ದ ಕಾಲದಲ್ಲಿ ಹಾಗೂ ಆಧುನಿಕತೆಯ ಗಾಳಿ ಬೀಸುತ್ತಿದ್ದ ಕಾಲದಲ್ಲಿ ನಿರ್ಮಾಣವಾದ ಭವ್ಯ ಬಂಗಲೆ.